2026-04-23 09:00:50

Another private company named for our metro station, deal for Rs 40 crore | ನಮ್ಮ ಮೆಟ್ರೋ ಸ್ಟೇಷನ್ಗೆ ಮತ್ತೊಂದು ಖಾಸಗಿ ಕಂಪನಿ ಹೆಸರು, 40 ಕೋಟಿ ರೂ.ಗೆ ಡೀಲ್ | Speed news kannada

Another private company named for our metro station, deal for Rs 40 crore | ನಮ್ಮ ಮೆಟ್ರೋ ಸ್ಟೇಷನ್ಗೆ ಮತ್ತೊಂದು ಖಾಸಗಿ ಕಂಪನಿ ಹೆಸರು, 40 ಕೋಟಿ ರೂ.ಗೆ ಡೀಲ್ | Speed news kannada

ಬಯೋಕಾನ್ ಹೆಬ್ಬಗೋಡಿ, ಡೆಲ್ಟಾ ಎಲೆಕ್ಟ್ರಾನಿಕ್ ಸಿಟಿ, ಪ್ರೆಸ್ಟಿಜ್ ಗ್ರೂಪ್ ಬೆಳ್ಳಂದೂರು ನಂತರ ಇದೀಗ ಬೆಂಗಳೂರು ನಮ್ಮ ಮೆಟ್ರೋ  ನಿಲ್ದಾಣಕ್ಕೆ ಮತ್ತೊಂದು ನಿಲ್ದಾಣಕ್ಕೆ ಖಾಸಗಿ ಕಂಪನಿ ಹೆಸರಿಡಲು ಒಪ್ಪಂದವಾಗಿದೆ. ಔಟರ್ ರಿಂಗ್ ರೋಡ್ ಪ್ರಮುಖ ಮೆಟ್ರೋ ನಿಲ್ದಾಣವೊಂದಕ್ಕೆ ‘ಬಾಗ್ ಮಾನೆ’ ಹೆಸರಿಡಲು ಬೆಂಗಳೂರು ಮೆಟ್ರೋ ರೈಲು ನಿಗಮವು ಅಧಿಕೃತವಾಗಿ ಬರೋಬ್ಬರಿ 40 ಕೋಟಿ ರೂಪಾಯಿಗೆ ಒಪ್ಪಂದ ಮಾಡಿಕೊಂಡಿದೆ. ಬಾಗ್ ಮಾನೆ ಡೆವಲಪರ್ಸ್‌ ಪ್ರೈವೆಟ್‌ ಲಿಮಿಟೆಡ್ ಜೊತೆಗೆ ಬಿಎಂಆರ್‌ಸಿಎಲ್‌ 20 ವರ್ಷಗಳ ಅವಧಿಗೆ ಈ ಒಪ್ಪಂದ ಮಾಡಿಕೊಂಡಿದೆ. ಈ ಹೆಸರಿಡುವ ಹಕ್ಕಿಗಾಗಿ ಕಂಪನಿಯು ಒಟ್ಟು 40 ಕೋಟಿ ರೂಪಾಯಿಗಳನ್ನು ಪಾವತಿಸಲಿದ್ದು, ವಿಶೇಷವೆಂದರೆ ಒಪ್ಪಂದಕ್ಕೆ ಸಹಿ ಹಾಕಿದ ಬೆನ್ನಲ್ಲೇ ಕಂಪನಿಯು ಈಗಾಗಲೇ 20 ಕೋಟಿ ರೂಪಾಯಿಗಳನ್ನು ಬಿಎಂಆರ್‌ಸಿಎಲ್‌ಗೆ ಮುಂಗಡವಾಗಿ ಪಾವತಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.