2026-04-23 09:36:27

America went to America America-America 2 | ಅಮೆರಿಕ ಅಮೆರಿಕ ಹೋಯಿತು ಅಮೆರಿಕ-ಅಮೆರಿಕ 2 | Speed news kannada

America went to America America-America 2 | ಅಮೆರಿಕ ಅಮೆರಿಕ ಹೋಯಿತು ಅಮೆರಿಕ-ಅಮೆರಿಕ 2 | Speed news kannada

ಅಮೆರಿಕ-ಅಮೆರಿಕ’ ಕನ್ನಡದ ಕಲ್ಟ್ ಸಿನಿಮಾಗಳಲ್ಲಿ ಒಂದು. ಇಂದಿಗೂ ಹಲವಾರು ಜನರ ನೆಚ್ಚಿನ ಸಿನಿಮಾಗಳಲ್ಲಿ ಒಂದಾಗಿದೆ. 1997ರ ಏಪ್ರಿಲ್ 11ರಂದು ಸಿನಿಮಾ ಬಿಡುಗಡೆ ಆಗಿತ್ತು. ಈಗ ಈ ಸಿನಿಮಾ 30ನೇ ವರ್ಷಕ್ಕೆ ಕಾಲಿಟ್ಟಿದೆ. ರಮೇಶ್ ಅರವಿಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ಒಟ್ಟಿಗೆ ನಟಿಸಿದ್ದ ಈ ಸಿನಿಮಾ ವರ್ಷಗಳ ಕಾಲ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಂಡಿತ್ತು. ಗೆಳೆತನ, ಪ್ರೀತಿ, ದೇಶ, ದೇಶಪ್ರೇಮ, ಆಧುನಿಕತೆಯ ಸೈಡ್ ಎಫೆಕ್ಟ್ಸ್ ಹೀಗೆ ಹಲವು ವಿಷಯಗಳನ್ನು ಚರ್ಚಿಸಿದ್ದ ಈ ಸಿನಿಮಾ ಹಲವು ದಾಖಲೆಗಳನ್ನು ಬರೆದಿತ್ತು. ಪ್ರಶಸ್ತಿಗಳಿಗೂ ಭಾಜನವಾಗಿತ್ತು. ಅಮೆರಿಕ-ಅಮೆರಿಕ 2’ ಸಿನಿಮಾವನ್ನು ನಾಗತಿಹಳ್ಳಿ ಅವರು ಘೋಷಿಸಿದ್ದಾರಾದರೂ ಸಿನಿಮಾದ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿಲ್ಲ. ಆದರೆ ನಾಗತಿಹಳ್ಳಿ ಅವರ ಪೋಸ್ಟ್ಗೆ ಕಮೆಂಟ್ ಮಾಡಿರುವ ಹಲವರು, ‘ಅಮೆರಿಕ-ಅಮೆರಿಕ’ ಸಿನಿಮಾವನ್ನು ಮರು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ. ‘ಅಮೆರಿಕ-ಅಮೆರಿಕ 2’ ಸಿನಿಮಾದಲ್ಲಿ ಹಳೆಯ ಮುಖಗಳನ್ನೇ ಅಂದರೆ ರಮೇಶ್ ಅರವಿಂದ್, ಹೇಮಾ ಪಂಚಮುಖಿ, ಅಕ್ಷಯ್ ಆನಂದ್ ಅವರನ್ನೇ ಹಾಕಿಕೊಳ್ಳಿ ಎಂದು ಇನ್ನಿತರೆ ಸಲಹೆಗಳನ್ನು ನೀಡಿದ್ದಾರೆ.

ಸಿನಿಮಾ ನಿರ್ದೇಶಿಸಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು ಸಿನಿಮಾದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದು, ‘ನಾನು ರೂಪಿಸಿದ್ದಲ್ಲ; ನನ್ನನ್ನೇ ರೂಪಿಸಿದ ಸಿನಿಮಾ! ಕೋಟಿ ಕೋಟಿ ಕಂಗಳಿಗೆ ಕನಸು ಕೊಟ್ಟ ಸಿನಿಮಾ. ಕೋಟಿ ಕೋಟಿ ಮನಗಳಿಗೆ ಮಮಕಾರವಿತ್ತ ಸಿನಿಮಾ. ಕನ್ನಡ ಜನತೆಗೆ ಕೋಟಿ ಕೋಟಿ ಕೃತಜ್ಞತೆಗಳು’ ಎಂದಿದ್ದಾರೆ. ಇದರ ಜೊತೆಗೆ ‘ಸದ್ಯದಲ್ಲೇ ನಿಮ್ಮೆದುರು ‘ಅಮೆರಿಕ-ಅಮೆರಿಕ 2’ ಎಂದು ಸಹ ನಾಗತಿಹಳ್ಳಿ ಚಂದ್ರಶೇಖರ್ ಅವರು ಘೋಷಿಸಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ್ ಅವರು ಇತ್ತೀಚೆಗೆ ಸಿನಿಮಾ ನಿರ್ದೇಶನ ತುಸು ಕಡಿಮೆ ಮಾಡಿದ್ದಾರೆ. ಅವರು ಕೊನೆಯದಾಗಿ ನಿರ್ದೇಶಿಸಿದ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಿದ್ದು 2020ರಲ್ಲಿ ‘ಇಂಡಿಯಾ vs ಇಂಗ್ಲಂಡ್’. ಅದಕ್ಕೆ ಮುಂಚೆ 2015 ರಲ್ಲಿ ‘ಇಷ್ಟಕಾಮ್ಯ’ ಸಿನಿಮಾ ನಿರ್ದೇಶಿಸಿದ್ದರು. ಇದೀಗ ಬಹಳ ವರ್ಷಗಳ ಬಳಿಕ ತಮಗೆ ದೊಡ್ಡ ಯಶಸ್ಸು, ಹೆಸರು ತಂದುಕೊಟ್ಟ ‘ಅಮೆರಿಕ-ಅಮೆರಿಕ’ ಸಿನಿಮಾದ ಸೀಕ್ವೆಲ್ ನಿರ್ದೇಶಿಸಲು ಮುಂದಾಗಿದ್ದಾರೆ. ನಾಗತಿಹಳ್ಳಿ ಅವರ ಸಿನಿಮಾಗಳನ್ನು ನೋಡುತ್ತಾ ಬಂದಿರುವ, ಅವರ ಸಿನಿಮಾಗಳ ಮೆಚ್ಚುವ ಅಭಿಮಾನಿಗಳು ನಾಗತಿಹಳ್ಳಿ ಅವರಿಂದ ಒಂದು ಸುಂದರ ಸಿನಿಮಾದ ನಿರೀಕ್ಷೆಯಲ್ಲಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.