2026-04-23 09:46:41

America said war stops for five days | ಐದು ದಿನ ಯುದ್ಧ ನಿಲ್ಲಿಸುವುದಾಗಿ ಹೇಳಿದ ಅಮೆರಿಕ ಇತ್ತ ಇರಾನ್‌ 50 ಸ್ಥಳಗಳ ಮೇಲೆ ದಾಳಿ ಮಾಡಿದ ಇಸ್ರೇಲ್ | Speed News Kannada

America said war stops for five days | ಐದು ದಿನ ಯುದ್ಧ ನಿಲ್ಲಿಸುವುದಾಗಿ ಹೇಳಿದ ಅಮೆರಿಕ ಇತ್ತ ಇರಾನ್‌ 50 ಸ್ಥಳಗಳ ಮೇಲೆ ದಾಳಿ ಮಾಡಿದ ಇಸ್ರೇಲ್ | Speed News Kannada

ಇರಾನ್‌ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ನ (IRGC) 50ಕ್ಕೂ ಹೆಚ್ಚು ನೆಲೆಗಳ ಮೇಲೆ ತಡರಾತ್ರಿ ದಾಳಿ ನಡೆಸಿದ್ದು, ಐಆರ್‌ಜಿಸಿಯ ಕಮಾಂಡ್ ಕೇಂದ್ರಗಳು, ಶಸ್ತ್ರಾಸ್ತ್ರಗಳ ಸಂಗ್ರಹಣಾ ಸೌಲಭ್ಯಗಳು ಮತ್ತು ವೈಮಾನಿಕ ರಕ್ಷಣಾ ವ್ಯವಸ್ಥೆಗಳ ಮೇಲೆ ದಾಳಿ ಮಾಡಿರುವುದಾಗಿ ಇಸ್ರೇಲ್ ರಕ್ಷಣಾ ಪಡೆಗಳು ಮಂಗಳವಾರ ತಿಳಿಸಿವೆ. X ನಲ್ಲಿನ ಪೋಸ್ಟ್‌ನಲ್ಲಿ ಈ ಕುರಿತಾದ ವಿವರಗಳನ್ನು ಹಂಚಿಕೊಂಡ ಇಸ್ರೇಲ್ ರಕ್ಷಣಾ ಪಡೆಗಳು, ಆಪರೇಷನ್‌ ರೋರಿಂಗ್ ಲಯನ್ ಪ್ರಾರಂಭವಾದಾಗಿನಿಂದ ಇರಾನ್ನನಾದ್ಯಂತ 3000ಕ್ಕೂ ಹೆಚ್ಚು ದಾಳಿಗಳನ್ನು ನಡೆಸಲಾಗಿದೆ ಎಂದು ತಿಳಿಸಿವೆ.
'ಆಪರೇಷನ್ ರೋರಿಂಗ್ ಲಯನ್ ಆರಂಭವಾದಾಗಿನಿಂದ ಇರಾನ್‌ನಾದ್ಯಂತ 3,000ಕ್ಕೂ ಅಧಿಕ ದಾಳಿಗಳು ನಡೆದಿವೆ. ನಿನ್ನೆ ಐಆರ್‌ಜಿಸಿ ಕಮಾಂಡ್ ಕೇಂದ್ರಗಳು, ಶಸ್ತ್ರಾಸ್ತ್ರ ಸಂಗ್ರಹಣಾ ಸೌಲಭ್ಯಗಳು ಮತ್ತು ವೈಮಾನಿಕ ರಕ್ಷಣಾ ವ್ಯವಸ್ಥೆಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ. ರಾತ್ರೋರಾತ್ರಿ, ಬ್ಯಾಲಿಸ್ಟಿಕ್ ಕ್ಷಿಪಣಿ ಸಂಗ್ರಹಣಾ ಸ್ಥಳಗಳು ಮತ್ತು ಉಡಾವಣಾ ತಾಣಗಳು ಸೇರಿದಂತೆ ಹೆಚ್ಚುವರಿಯಾಗಿ 50+ ನೆಲೆಗಳ ಮೇಲೆ ದಾಳಿ ಮಾಡಲಾಯಿತು' ಎಂದು ಐಡಿಎಫ್ ಎಕ್ಸ್‌ನಲ್ಲಿ ಬರೆದಿದೆ.
ಈ ಪ್ರದೇಶದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಬಾಗ್ಲಾದ್‌ನಲ್ಲಿ ಸ್ಪೋಟಗಳ ಶಬ್ದ ಕೇಳಿಬಂದಿದೆ ಎಂದು ಅಲ್ ಜಜೀರಾ ಬ್ರೇಕಿಂಗ್ ಮಂಗಳವಾರ ವರದಿ ಮಾಡಿದೆ. ಇರಾಕ್‌ನಲ್ಲಿರುವ ಪಿಎಂಎಫ್ ನೆಲೆಯ ಮೇಲೆ ಅಮೆರಿಕ ವೈಮಾನಿಕ ದಾಳಿಯಲ್ಲಿ ಸಾವಿನ ಸಂಖ್ಯೆ 14ಕ್ಕೆ ಏರಿದೆ ಎಂದು ಅದು ಉಲ್ಲೇಖಿಸಿದೆ. ಅಲ್‌ ಜಜೀರಾ ಬ್ರೇಕಿಂಗ್ ಇರಾನಿನ ಮಾಧ್ಯಮವನ್ನು ಉಲ್ಲೇಖಿಸಿ, ದೇಶದಲ್ಲಿನ ಇಂಧನ ಮೂಲಸೌಕರ್ಯಗಳ ಮೇಲೆ ದಾಳಿ ನಡೆದಿದೆ. 'ಕ್ರಿಮಿನಲ್ ಇರಾನಿನ ಆಕ್ರಮಣ' ದಿಂದಾಗಿ ಇಂಧನ ಸೌಲಭ್ಯವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಬಹ್ರನ್ ಹೇಳಿದೆ ಎಂದು ಅದು ಗಮನಿಸಿದೆ.
ಇರಾನಿನ ಕ್ಷಿಪಣಿ ಟೆಲ್ ಅವೀವ್‌ಗೆ ಅಪ್ಪಳಿಸಿದ ನಂತರ ಆರು ಜನರು ಗಾಯಗೊಂಡಿದ್ದಾರೆ ಎಂದು ಟೈಮ್ಸ್ ಆಫ್ ಇಸ್ರೇಲ್ ಮಂಗಳವಾರ ವರದಿ ಮಾಡಿದೆ.
ಸುಮಾರು 100 ಕೆಜಿ ಸ್ಪೋಟಕಗಳನ್ನು ಹೊತ್ತೊಯ್ಯುವ ಕ್ಷಿಪಣಿ ಕೇಂದ್ರ ಟೆಲ್ ಅವೀವ್‌ಗೆ ಅಪ್ಪಳಿಸಿದೆ. ಇದರ ಪರಿಣಾಮವಾಗಿ ಹಲವಾರು ಕಟ್ಟಡಗಳು ಮತ್ತು ವಾಹನಗಳು ಹಾನಿಗೊಳಗಾಗಿವೆ. ಕ್ಷಿಪಣಿಯ ಅವಶೇಷಗಳು ಟೆಲ್‌ ಅವಿವ್‌ನ ಪೂರ್ವಕ್ಕೆ ಹತ್ತಿರದ ಪ್ರದೇಶವಾದ ರೋಶ್‌ ಹಯಾಯಿನ್‌ನಲ್ಲಿಯೂ ಬಿದ್ದಿವೆ ಎಂದು ಪೊಲೀಸರು ಹೇಳಿರುವುದಾಗಿ ಚಾನೆಲ್ 12 ವರದಿಯನ್ನು ಅದು ಉಲ್ಲೇಖಿಸಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.