ಭಾರತೀಯ ಕ್ರಿಕೆಟ್ ಲೋಕದಲ್ಲಿ ತನ್ನ ಸ್ಪಿನ್ ಬೌಲಿಂಗ್ ಮೂಲಕ ಗಮನಸೆಳೆದ ಯುಜ್ವೇಂದ್ರ ಚಹಲ್ ಕಳೆದ ಕೆಲವು ದಿನಗಳಿಂದ ತಮ್ಮ ವೈಯಕ್ತಿಕ ವಿಷಯದ ಕಾರಣದಿಂದಾಗಿ ಸುದ್ದಿಯಲ್ಲಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯಷ್ಟೇ ಸಿಗರೇಟ್ ಸೇದಿ ರಸ್ತೆಯಲ್ಲಿ ಬಿಸಾಕಿ ಹೋಗಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಅಷ್ಟೇ ಅಲ್ಲದೆ ಆ ಕುರಿತಾದ ವಿಡಿಯೋ ಕೂಡಾ ಎಲ್ಲೆಡೆ ವೈರಲ್ ಆಗಿತ್ತು. ಇವೆಲ್ಲದರ ಮಧ್ಯೆ ಇದೀಗ ಚಹಲ್ ಹೊಸ ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. ಇದೀಗ ಯುಜ್ವೇಂದ್ರ ಚಾಹಲ್, ನಟಿ ತಾನಿಯಾ ಚಟರ್ಜಿ ಅವರಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಒಂದನ್ನು ಕಳುಹಿಸಿದ್ದಾರೆ. ಈ ವಿಷಯ ಇದೀಗ ಸೋಷಿಯಲ್ ಮೀಡಿಯಾಗಳಲ್ಲಿ ಫುಲ್ ಟ್ರೆಂಡಿಂಗ್ ನಲ್ಲಿದೆ.
ಪತ್ನಿ ಧನಶ್ರೀ ವರ್ಮಾ ಅವರಿಂದ ವಿಚ್ಛೇದನ ಪಡೆದ ನಂತರ ಯುಜ್ವೇಂದ್ರ ಚಾಹಲ್ ಅವರ ವೈಯಕ್ತಿಕ ಜೀವನ ಹೆಚ್ಚು ಗಮನ ಸೆಳೆದಿದೆ. ಈ ಅವಧಿಯಲ್ಲಿ ಅವರು ಆರ್.ಜೆ. ಮಹ್ವಾಶ್ ಜೊತೆ ಕಾಣಿಸಿಕೊಂಡಿದ್ದು ಕೂಡ ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇತ್ತೀಚೆಗೆ ಕಾರ್ ಚಾಲನೆ ಮಾಡುವಾಗ ಸಿಗರೇಟ್ ಸೇದುತ್ತಿರುವ ವಿಡಿಯೋ ವೈರಲ್ ಆದ ಬಳಿಕ ಅವರು ಟ್ರೋಲ್‌ಗೂ ಒಳಗಾದರು. ಈ ಹಿನ್ನೆಲೆಯಲ್ಲಿ ಈಗ ಮತ್ತೊಂದು ಹೊಸ ವಿವಾದ ಅವರ ಸುತ್ತ ಸುತ್ತುತ್ತಿದೆ.
ಉಲ್ಲು ಮತ್ತು ಗಂಡಿ ಬಾತ್ ವೆಬ್ ಸರಣಿಗಳ ಮೂಲಕ ಪರಿಚಿತರಾದ ನಟಿ ತಾನಿಯಾ ಚಟರ್ಜಿ, ಚಾಹಲ್ ಬಗ್ಗೆ ಕೆಲವು ಹೇಳಿಕೆಗಳನ್ನು ನೀಡಿದ್ದಾರೆ. ಇತ್ತೀಚೆಗೆ ಪಾಪರಾಜಿಗಳೊಂದಿಗೆ ಮಾತನಾಡುವಾಗ ಅವರು ತಮ್ಮ ಇನ್‌ಸ್ಟಾಗ್ರಾಮ್ ಡೈರೆಕ್ಟ್ ಮೆಸೇಜ್‌ಗಳನ್ನು ತೋರಿಸಿ ಚರ್ಚೆಗೆ ಕಾರಣರಾದರು. ತಮ್ಮ ವಿಡಿಯೋವನ್ನು ನೋಡಿ ಚಹಲ್ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಕಳುಹಿಸಿದ್ದಾರೆ ಎಂದು ತಾನಿಯಾ ಹೇಳಿದ್ದಾರೆ. ಪಾಪರಾಜಿಗಳು ಕೇಳಿದ ನಂತರ ತಾನಿಯಾ ಚಟರ್ಜಿ ಸ್ವಲ್ಪ ಮುಜುಗರದಿಂದಲೇ ಕ್ಯಾಮೆರಾ ಮುಂದೆ ಯುಜ್ವೇಂದ್ರ ಚಹಲ್ ಅವರ ಹೆಸರು ಮತ್ತು ಸಂದೇಶವನ್ನು ತೋರಿಸಿದರು. ಚಹಲ್ ಕಳುಹಿಸಿದ್ದ ಸಂದೇಶದಲ್ಲಿ ಕ್ಯೂಟ್ ಎಂಬ ಪದ ಬಳಸಲಾಗಿದೆ ಎಂದು ಅವರು ಹೇಳಿದ್ದಾರೆ. ಈ ಘಟನೆ ಸಾಮಾಜಿಕ ಮಾಧ್ಯಮದಲ್ಲಿ ವೇಗವಾಗಿ ವೈರಲ್ ಆಗಿದ್ದು, ಅಭಿಮಾನಿಗಳ ನಡುವೆ ಹಲವಾರು ಪ್ರಶ್ನೆಗಳು ಹುಟ್ಟಿಕೊಂಡಿವೆ.