2026-03-07 05:17:04

Actor Prem Completes 24 Years In The Film Industry | ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ ನೆನಪಿರಲಿ ನಟ ಪ್ರೇಮ್ | Speed News kannada

Actor Prem Completes 24 Years In The Film Industry | ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ ನೆನಪಿರಲಿ ನಟ ಪ್ರೇಮ್ | Speed News kannada

ನಟ ಪ್ರೇಮ್ ಅವರು ಕನ್ನಡ ಚಿತ್ರರಂಗದಲ್ಲಿ 24 ವರ್ಷ ಪೂರೈಸಿದ್ದಾರೆ. ಈ ಕ್ಷಣವನ್ನು ಕುಟುಂಬದ ಜೊತೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ.
ಪ್ರೇಮ್ ಅವರ ಪತ್ನಿ ಜ್ಯೋತಿ, 'ನನ್ನ ರಾಜಕುಮಾರನಿಗೆ ಶುಭವಾಗಲಿ. ಚಿತ್ರರಂಗದಲ್ಲಿ ಇನ್ನಷ್ಟು ಯಶಸ್ಸು ಕಾಣಲಿ' ಎಂದು ಬರೆದು ಶುಭಹಾರೈಸಿದ್ದಾರೆ.ನಟ ಪ್ರೇಮ್ ಅವರು 2000ರಲ್ಲಿ 'ಪ್ರಾಣ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಆದರೆ ಈ ಚಿತ್ರ ಅಂದುಕೊಂಡಷ್ಟು ಸದ್ದು ಮಾಡಲಿಲ್ಲ. 2005ರಲ್ಲಿ ಬಿಡುಗಡೆಗೊಂಡ 'ನೆನಪಿರಲಿ' ಚಿತ್ರ ಭರ್ಜರಿ ಯಶಸ್ಸು ಗಳಿಸಿತ್ತು. ಆ ಬಳಿಕ ಚಂದನವನದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ.'ಗುಣವಂತ', 'ಜೊತೆ ಜೊತೆಯಲಿ', 'ಚಾರ್ಮಿನಾರ್', 'ಪಲ್ಲಕ್ಕಿ', 'ಚೌಕ', 'ಪ್ರೇಮಂ ಪೂಜ್ಯಂ' ಚಿತ್ರದಲ್ಲಿ ನಟಿಸಿ ಪ್ರೇಕ್ಷಕರ ಗಮನ ಸೆಳೆದಿದ್ದಾರೆ. ಇವರ ನಟನೆಯ 'ಓ ಗುಣವಂತ'.. 'ತುರ್ತಿನಲ್ಲಿ ಗೀಚಿದ'.. 'ಸುಮ್ಮನೆ ಸುಮ್ಮನೆ ಇದ್ದರೂ ಸುಮ್ಮನೆ', 'ಒಲವು ಒಂಟಿಯಲ್ಲ'.. 'ಇಂದು ಬಾನಿಗೆಲ್ಲ ಹಬ್ಬ' ಹಾಡುಗಳು ಪ್ರೇಕ್ಷಕರ ಗಮನ ಸೆಳೆದಿವೆ. ಸದ್ಯ, ಪ್ರೇಮ್ ಅವರು ಸ್ಪಾರ್ಕ್, ಡಿಡಿಢಿಕ್ಕಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗೆ ಇವರ ಪುತ್ರಿ ಅಮೃತಾ ಪ್ರೇಮ್ ಅವರು 'ಟಗರು ಪಲ್ಯ' ಮೂಲಕ ಚಿತ್ರರಂಗಕ್ಕೆ ಕಾಲಿಟ್ಟಿದ್ದು, ಸದ್ಯ ಧೀರೇನ್ ಆರ್. ರಾಜ್‌ಕುಮಾರ್ ಅವರ ಜೊತೆ ಪಬ್ಬಾರ್ ಚಿತ್ರದಲ್ಲಿ ನಟಿಸುತ್ತಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.