2026-04-23 11:53:38

Aakash re release | ಆಕಾಶ್ ಮರುಬಿಡುಗಡೆ ಸಂಭ್ರಮದ ಮಧ್ಯೆ ಅಪ್ಪು ನೆನಪು ರಮ್ಯಾ ಹಂಚಿದ ಅಪರೂಪದ ವಿಡಿಯೋ ವೈರಲ್ | Speed News Kannada

Aakash re release  | ಆಕಾಶ್ ಮರುಬಿಡುಗಡೆ ಸಂಭ್ರಮದ ಮಧ್ಯೆ ಅಪ್ಪು ನೆನಪು ರಮ್ಯಾ ಹಂಚಿದ ಅಪರೂಪದ ವಿಡಿಯೋ ವೈರಲ್ | Speed News Kannada

ಪುನೀತ್ ರಾಜ್ ಕುಮಾರ್ ಅಭಿನಯದ 'ಆಕಾಶ್' ಸಿನಿಮಾ ಮರುಬಿಡುಗಡೆಯಾಗಿ ಮತ್ತೆ ಅಭಿಮಾನಿಗಳ ಹೃದಯ ಗೆದ್ದಿದೆ. 2005ರಲ್ಲಿ ಭಾರೀ ಯಶಸ್ಸು ಕಂಡ ಈ ಸಿನಿಮಾ, ಮತ್ತೆ ಚಿತ್ರಮಂದಿರಗಳಲ್ಲಿ ಅದೇ ಸಂಭ್ರಮವನ್ನು ಮರುಕಳಿಸಿದ್ದು ವಿಶೇಷ. ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿದ ಈ ಪ್ರದರ್ಶನದಲ್ಲಿ ನಟಿ ರಮ್ಯಾ ಸೇರಿದಂತೆ ದೊಡ್ಡನೆಯ ಹಲವು ಸದಸ್ಯರು ಭಾಗವಹಿಸಿದ್ದು ಗಮನ ಸೆಳೆಯಿತು. ಚಿತ್ರಮಂದಿರದಲ್ಲೇ ಅಭಿಮಾನಿಗಳ ಜೊತೆಗೂಡಿ ರಮ್ಯಾ 'ನೀನೆ ನೀನೆ' ಹಾಡು ಹಾಡಿದ ಕ್ಷಣ, ಎಲ್ಲರಿಗೂ ಭಾವುಕ ಅನುಭವ ನೀಡಿತು. ಮರುಬಿಡುಗಡೆ ದಿನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪುನೀತ್ ರಾಜ್ ಕುಮಾರ್ ಜೊತೆಗೆ ಕಳೆದ ದಿನಗಳನ್ನು ನೆನಪಿಸಿಕೊಂಡು, 'ಆಕಾಶ್' ಚಿತ್ರೀಕರಣದ ಸಿಹಿ ಕ್ಷಣಗಳನ್ನು ಹಂಚಿಕೊಂಡಿದ್ದರು.
ಈಗ ಅದಕ್ಕಿಂತಲೂ ವಿಶೇಷವಾಗಿ, ರಮ್ಯಾ ಅಪರೂಪದ ಬಿಹೈಂಡ್ ಸೀನ್ಸ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 2004-2005ರಲ್ಲಿ ಸೋನಿ ಹ್ಯಾಂಡಿಕ್ಯಾಮ್‌ ನಲ್ಲಿ ಚಿತ್ರೀಕರಿಸಲಾದ ಈ ವಿಡಿಯೋ, 'ನೀನೆ ನೀನೆ' ಹಾಡಿನ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಿದ ಸಂದರ್ಭದದ್ದು.
ಈ ವಿಡಿಯೋದಲ್ಲಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಯುವರಾಜ್ ಕುಮಾರ್, ವಿನಯ್ ರಾಜ್ ಕುಮಾರ್ ಸೇರಿದಂತೆ ದೊಡ್ಜ್‌ನೆಯ ಅನೇಕ ಸದಸ್ಯರು ಕಾಣಿಸಿಕೊಂಡಿದ್ದಾರೆ. ಡಾ ರಾಜ್ ಕುಮಾರ್, ಪಾರ್ವತಮ್ಮ ರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ಅವರ ಸಾನ್ನಿಧ್ಯವೂ ಈ ವಿಡಿಯೋವನ್ನು ಇನ್ನಷ್ಟು ಅಮೂಲ್ಯವಾಗಿಸಿದೆ.
ವಿಡಿಯೋ ಹಂಚಿಕೊಂಡಿರುವ ರಮ್ಯಾ, ಹಳೆಯ ನೆನಪುಗಳನ್ನು ಮತ್ತೆ ಜೀವಂತಗೊಳಿಸುವ ಪ್ರಯತ್ನ ಇದಾಗಿದೆ ಎಂದು ತಿಳಿಸಿದ್ದಾರೆ. ಆ ಕಾಲದ ನಗು, ಸ್ನೇಹ ಮತ್ತು ಆತ್ಮೀಯತೆಯನ್ನು ಮತ್ತೆ ನೋಡಿದಾಗ ಅದು ಎಂದಿಗೂ ಮರೆಯಲಾಗದ ಕ್ಷಣಗಳಾಗಿ ಉಳಿದಿವೆ ಎಂದು ಭಾವುಕರಾಗಿ ಬರೆದಿದ್ದಾರೆ.
ಒಟ್ಟಾರೆ, 'ಆಕಾಶ್' ಮರುಬಿಡುಗಡೆ ಕೇವಲ ಸಿನಿಮಾ ರೀ-ರಿಲೀಸ್ ಅಲ್ಲ; ಅದು ಅಪ್ಪು ಜೊತೆಗಿನ ಅನೇಕ ನೆನಪುಗಳನ್ನು ಮತ್ತೆ ಜೀವಂತಗೊಳಿಸಿದ ಭಾವನಾತ್ಮಕ ಪ್ರಯಾಣವಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.