2026-04-24 12:19:37

9 killed in Kerala after TT vehicle falls into ditch | ಕಂದಕಕ್ಕೆ ಉರುಳಿಬಿದ್ದ ಟಿಟಿ ವಾಹನ, ಕೇರಳದ 9 ಮಂದಿ ಸಾವು | Speed news kannada

9 killed in Kerala after TT vehicle falls into ditch | ಕಂದಕಕ್ಕೆ ಉರುಳಿಬಿದ್ದ ಟಿಟಿ ವಾಹನ, ಕೇರಳದ 9 ಮಂದಿ ಸಾವು | Speed news kannada

ಪ್ರವಾಸಕ್ಕೆ ಬಂದಿದ್ದ ಟೆಂಪೊ ಟ್ರಾವೆಲರ್ 800 ಅಡಿ ಆಳದ ಕಂದಕಕ್ಕೆ ಬಿದ್ದ ಪರಿಣಾಮ ಕೇರಳದ ಒಂಬತ್ತು ಜನರು ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕೊಯಮತ್ತೂರು ಜಿಲ್ಲೆಯ ಪೊಲ್ಲಾಚಿಯಲ್ಲಿ ಇಂದು ನಡೆದಿದೆ. ಅತಿರಪಿಲ್ಲಿಯಿಂದ ಪೊಲ್ಲಾಚಿಗೆ ಹೋಗುತ್ತಿದ್ದ ವ್ಯಾನ್ ವಾಲ್ಪರೈನ 13 ನೇ ತಿರುವಿನಲ್ಲಿ ಗಾರ್ಡ್‌ರೈಲ್‌ಗೆ ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕೇರಳದ ಮಲಪ್ಪುರಂ ಜಿಲ್ಲೆಯ ಪಾಂಗ್ ಪಲ್ಲಿಪರಂಬ ಶಾಲೆಯ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ವ್ಯಾನ್ ನಲ್ಲಿ ಸಂಚರಿಸುತ್ತಿದ್ದರು. ವ್ಯಾನ್‌ನಲ್ಲಿದ್ದ ಕೆಲವು ಶಿಕ್ಷಕರೊಂದಿಗೆ ಅವರ ಕುಟುಂಬ ಸದಸ್ಯರು ಕೂಡ ಇದ್ದರು.

ಮೃತರನ್ನು ಪುಲಮಂಥೋಲ್ ಮೂಲದ ಅಜಿತಾ (54), ಶಾಲೆಯ ಹೆಡ್​ ಮಾಸ್ಟರ್ ರಮ್ಲಾ (52), ಸುಹರಾ (43), ಆಶಾ (41), ಮಜೀದ್ (43), ಸಜಿತಾ (45), ಶಕೀಲಾ (37), ರುಖಿಯಾ (39) ಎಂದು ಗುರುತಿಸಲಾಗಿದೆ. ಅಲ್ಲದೆ, ವ್ಯಾನ್‌ನ ಚಾಲಕ ನೌಶಾದ್ (39) ಕೂಡ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ವ್ಯಾನ್‌ನಲ್ಲಿ 16 ಪ್ರಯಾಣಿಕರು ಇದ್ದರು. ವಾಲ್ಪಾರೈ ಪ್ರವಾಸ ಮುಗಿಸಿ, ಶುಕ್ರವಾರ ಸಂಜೆ ಪ್ರಯಾಣಿಕರು ಪೊಲ್ಲಾಚಿ ಮೂಲಕ ಕೇರಳಕ್ಕೆ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ."ವಾಲ್ಪಾರೈ ಬೆಟ್ಟದ ರಸ್ತೆಯ 13ನೇ ತಿರುವಿನಲ್ಲಿ, ಚಾಲಕನ ನಿಯಂತ್ರಣ ತಪ್ಪಿದ ವಾಹನವು ಗಾರ್ಡ್‌ರೈಲ್‌ಗೆ ಡಿಕ್ಕಿ ಹೊಡೆದು ಕಾಡಿನಲ್ಲಿ 800 ಅಡಿ ಆಳದ ಕಂದಕಕ್ಕೆ ಬಿದ್ದಿತು" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಅಪಘಾತದಲ್ಲಿ ಗಾಯಗೊಂಡವರನ್ನು ಚಿಕಿತ್ಸೆಗಾಗಿ ಪೊಲ್ಲಾಚಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮೃತರ ಶವಗಳನ್ನು ವಾಲ್ಪಾರೈ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹೊರತೆಗೆದು, ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಅಪಘಾತದಲ್ಲಿ ವಾಹನವು ನಜ್ಜುಗುಜ್ಜಾಗಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.