2026-04-23 08:23:16

8 million people turned against the US president, protesting saying

8 million people turned against the US president, protesting saying

ಅಮೆರಿಕದ ಮೇಲೆ ಇರಾನ್‌ ತಿರುಗಿ ಬಿಳುವುದು ಹಾಗಿರಲೇ ಸ್ವತಃ ಅಮೆರಿಕ ಜನರೇ ಡೊನಾಲ್ಡ್‌ ಟ್ರಂಪ್‌ ವಿರುದ್ಧ ತಿರುಗಿ ಬಿದ್ದಿದ್ದಾರೆ. ಅಮೆರಿಕ ಅಧ್ಯಕ್ಷ ಟ್ರಂಪ್‌ ಅವರ ಯುದ್ಧ ನೀತಿಗಳು ಹಾಗೂ ಹಣದುಬ್ಬರದಿಂದ ಜನರು ಬೇಸತ್ತಿದ್ದು, ಟ್ರಂಪ್‌ಯಿಂದಲೇ ಇಷ್ಟೆಲ್ಲಾ ಆಗಿದೆ ಎಂದು ಕೋಪಗೊಂಡಿದ್ದಾರೆ. ಅಮೆರಿಕದ ಸುಮಾರು 50 ನಗರಗಳಲ್ಲಿ ಟ್ರಂಪ್‌ ವಿರುದ್ಧ ಪ್ರತಿಭಟನೆಗಳನ್ನು ನಡೆಸಿದ್ದಾರೆ. ಅಮೆರಿಕದ ನಗರಗಳಲ್ಲಿರುವ ಸುಮಾರು 80ಲಕ್ಷ ಜನರು ಟ್ರಂಪ್‌ ವಿರುದ್ಧ ʼನೋ ಕಿಂಗ್ಸ್‌ ʼ ಎಂಬ ಫಲಕಗಳನ್ನು ಹಿಡಿದುಕೊಂಡು ಪ್ರತಿಭಟನೆ ನಡೆಸಿದ್ದಾರೆ. ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ರಾಜ್ಯಗಳಲ್ಲಿ ರ್ಯಾಲಿಗಳು ಮತ್ತು ಮೆರವಣಿಗೆಗಳು ನಡೆದಿದ್ದು, ಟ್ರಂಪ್‌ ಸಭೆಗಳು ಆಡಳಿತಗಳು ಸರಿಯಿಲ್ಲ ಎಂದು ಟ್ರಂಪ್‌ ವಿರುದ್ದ ಘೋಷಣೆಗಳನ್ನು ಕೂಗುತ್ತಾ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕೂಡಲೇ ಟ್ರಂಪ್‌ ದೇಶದಲ್ಲಿ ಹಣದುಬ್ಬರವನ್ನು ಕಡಿಮೆಮಾಡಬೇಕು, ಆಡಳಿತವನ್ನು ನಿಲ್ಲಿಸಬೇಕು ಎಂದು ಒತ್ತಾಹಿಸಿದ್ದಾರೆ.  

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.