2026-04-24 01:42:47

15 crore big fraud on elderly couple digital arrest on Belgaum businessman | ವೃದ್ಧ ದಂಪತಿಗೆ 15ಕೋಟಿ ಬಿಗ್‌ ಫ್ರಾಡ್ ಬೆಳಗಾವಿ ಉದ್ಯಮಿಗೆ ಡಿಜಿಟಲ್‌ ಅರೆಸ್ಟ್ | Speed News Kannada

15 crore big fraud on elderly couple digital arrest on Belgaum businessman | ವೃದ್ಧ ದಂಪತಿಗೆ 15ಕೋಟಿ ಬಿಗ್‌ ಫ್ರಾಡ್ ಬೆಳಗಾವಿ ಉದ್ಯಮಿಗೆ ಡಿಜಿಟಲ್‌ ಅರೆಸ್ಟ್ | Speed News Kannada

ಇತ್ತೀಚೆಗೆ ಎಲ್ಲೆಡೆ ಹಣಕ್ಕಾಗಿ ಖದಮೀರು ನಾನಾ ಟೆಕ್ನಿಕ್‌ ಕಂಡುಕೊಂಡಿದ್ದಾರೆ. ಎಷ್ಟೇ ಜಾಗೃತಿ ಮೂಡಿಸಿದ್ರೂ, ಎಷ್ಟೇ ಜವಾಬ್ದಾರಿಯಾಗಿರಿ ಅಂತಾ ಮನವರಿಕೆ ಮಾಡಿಕೊಟ್ರೂ ವಂಚನೆ ಪ್ರಕರಣಗಳು ಮಾತ್ರ ಕಡಿಮೆಯಾಗ್ತಿಲ್ಲ. ವೃದ್ಧ ಉದ್ಯಮಿಯೊಬ್ಬರು ಸೈಬರ್‌ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 15 ಕೋಟಿ ಹಣ ಕಳೆದುಕೊಂಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿ ಕೋಟಿ ಕೋಟಿ ಹಣ ಕಳೆದುಕೊಂಡಿದ್ದಾರೆ.
ವೃದ್ಧ ಉದ್ಯಮಿಗೆ ವಿಡಿಯೋ ಕಾಲ್ ಮಾಡಿದ್ದ ಸೈಬರ್‌ ವಂಚಕರು, ನಿಮ್ಮ ಬ್ಯಾಂಕ್ ಖಾತೆ ಮನಿ ಲಾಂಡ್ರಿಂಗ್ ಫ್ರಾಡ್‌ ಲಿಸ್ಟ್‌ನಲ್ಲಿ ತೋರಿಸುತ್ತಿದೆ. ನೀವು ಮನಿ ಲಾಡ್ರಿಂಗ್ ಮಾಡ್ತಿದ್ದೀರಿ ಎಂದು ಬೆದರಿಕೆ ಹಾಕಿದ್ದರು. ನಿಮ್ಮ ಹಣ ಬೇರೆ ಖಾತೆಗೆ ವರ್ಗಾಯಿಸಿ ಎಂದು ವಂಚಕರು ಅಕೌಂಟ್ ನಂಬರ್ ಕೊಟ್ಟಿದ್ದಾರೆ. ತನಿಖೆ ಮುಗಿದ ಬಳಿಕ ನಿಮ್ಮ ಹಣ ಮರಳಿಸುತ್ತೇವೆ ಎಂದು ನಂಬಿಸಿದ್ದಾರೆ. ಈ ರೀತಿ ವೃದ್ಧನಿಂದ ಹಂತ ಹಂತವಾಗಿ 15 ಕೋಟಿ ಹಣ ಹಾಕಿಸಿಕೊಂಡಿದ್ದಾರೆ. ಬಳಿಕ ಸಂಪರ್ಕಕ್ಕೆ ಸಿಗದೇ ಇದ್ದಾಗ ಸಂತ್ರಸ್ತನಿಗೆ ಅನುಮಾನ ಬಂದಿದೆ.
ಮಾ.18ಕ್ಕೆ ವೃದ್ಧ ದಂಪತಿಗೆ ಬಂತು ಮೆಸೇಜ್!
ಮಾರ್ಚ್‌ 18 ರಂದು ವೃದ್ಧ ಉದ್ಯಮಿ ಡಿಜಿಟಲ್ ಅರೆಸ್ಟ್‌ಗೆ ಒಳಗಾಗಿದ್ದರು. ಬಳಿಕ ಬೆಳಗಾವಿ ನಗರ ಸಿಇಎನ್ ಠಾಣೆಗೆ ದೂರು ನೀಡಿದ್ದಾರೆ. ಸಿಇಎನ್ ಪೊಲೀಸರು ಸೈಬರ್ ವಂಚಕರ ಅಕೌಂಟ್ ಪ್ರೀಜ್ ಮಾಡಿದ್ದಾರೆ. ಈಗಾಗಲೇ 15 ಕೋಟಿ ಪೈಕಿ 90 ಲಕ್ಷ ಹಣ ಇದ್ದ ಖಾತೆ ಪ್ರೀಜ್ ಮಾಡಿದ್ದಾರೆ. 
ಸೈಬರ್ ವಂಚಕರ ಬಂಧನಕ್ಕೆ ಬೆಳಗಾವಿ ‌ಪೊಲೀಸ್ ಕಮಿಷನರ್‌ ವಿಶೇಷ ತಂಡ ರಚಿಸಿದ್ದಾರೆ. ಸೈಬರ್ ವಂಚಕರ ಈ ರೀತಿಯ ಬೆದರಿಕೆಗೆ ಹೆದರದೆ ದೂರು ನೀಡುವಂತೆ ಪೊಲೀಸರ ಮನವಿ ಮಾಡಿದ್ದಾರೆ. ಕೊನೆಗಾಲದಲ್ಲಿ ನೆಮ್ಮದಿಯಾಗಿರಬೇಕು.. ಯಾರ ಬಳಿ ಕೈಚಾಚದೇ ಫೈನಾನ್ಶಿಯಲಿ ಇಂಡಿಪೆಂಡೆಂಟ್‌ ಆಗಿರ್ಬೇಕು ಅಂತಾ ವೃದ್ಧ ದಂಪತಿ ದುಡ್ಡು ಕೂಡಿಟ್ಟಿದ್ರು. ಆದ್ರೆ, ಅದಕ್ಕೂ ಖತರ್ನಾಕ್‌ ಖದಮರು ಕಲ್ಲು ಹಾಕಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಈ ರೀತಿಯ ವಂಚನೆ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ.. ಸೈಬರ್‌ ಕ್ರೈಂ ಪೊಲೀಸರು, ಇಂಥಾ ಖದಮೀಮರಿಗೆ ಬ್ರೇಕ್‌ ಹಾಕುವ ಕೆಲಸ ಮಾಡಬೇಕಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.