2026-03-07 07:21:37

10-month-old baby dies in accident | 5 ಮಕ್ಕಳ ಜೀವ ಉಳಿಸಿದ ಅಪಘಾತದಲ್ಲಿ ಮೃತಪಟ್ಟ10 ತಿಂಗಳ ಮಗು | Speed News Kannada

10-month-old baby dies in accident | 5 ಮಕ್ಕಳ ಜೀವ ಉಳಿಸಿದ ಅಪಘಾತದಲ್ಲಿ ಮೃತಪಟ್ಟ10 ತಿಂಗಳ ಮಗು | Speed News Kannada

ಕೊಚ್ಚಿ: 10 ತಿಂಗಳ ಅಲಿನ್ ಶೆರಿನ್ ಅಬ್ರಹಾಂ ಎಂಬ ಬಾಲಕಿ ಕೇರಳ ರಾಜ್ಯದ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.
ಪತ್ತನಂತಿಟ್ಟ ಜಿಲ್ಲೆಯ ಮಲ್ಲಪ್ಪಳ್ಳಿಯ ಅರುಣ್ ಅಬ್ರಹಾಂ ಮತ್ತು ಶೆರಿನ್ ಆನ್‌ಜಾನ್ ಅವರ 10 ತಿಂಗಳ ಪುತ್ರಿ ಅಲಿನ್ ಶೆರಿನ್ ಅಬ್ರಹಾಂ ಅಪಘಾತದಲ್ಲಿ ಮೃತಪಟ್ಟಿದ್ದರು. ಆದರೂ ಆ ಪುಟ್ಟ ಕಂದಮ್ಮ 5 ಮಕ್ಕಳ ಜೀವ ಉಳಿಸಿದ್ದಾರೆ.
ಅಲಿನ್ ಶೆರಿನ್‌ ಕಂದಮ್ಮನ ಯಕೃತ್ತು, ಎರಡು ಮೂತ್ರಪಿಂಡಗಳು, ಹೃದಯ ಕವಾಟ ಮತ್ತು ಎರಡು ಕಣ್ಣುಗುಡ್ಡೆಗಳನ್ನು ಎರ್ನಾಕುಳಂನ ಅಮೃತ ಆಸ್ಪತ್ರೆಗೆ ದಾನ ಮಾಡಲಾಗಿದೆ.
ಆರೋಗ್ಯ ಸಚಿವೆ ವೀಣಾ ಜೋರ್ಜ್ ಪ್ರತಿಕ್ರಿಯಿಸಿ ಅಂಗಾಂಗ ದಾನ ಮಾಡಿದ ಅಲಿನ್ ಶೆರಿನ್ ರಾಜ್ಯದಲ್ಲಿ ಅತ್ಯಂತ ಕಿರಿಯ ಅಂಗಾಂಗ ದಾನಿ ಎಂಬ ಖ್ಯಾತಿಗೆ ಭಾಜನಳಾಗಿದ್ದಾಳೆ. ಅತ್ಯಂತ ಕಿರಿಯ ಮಗು ಅಂಗಾಂಗ ದಾನದ ಮೂಲಕ ಯಕೃತ್ತು ಪಡೆಯುತ್ತಿದೆ. ಇಬ್ಬರು ಮಕ್ಕಳು ಇತಿಹಾಸದ ಭಾಗವಾಗಲಿದ್ದಾರೆ ಎಂದು ತಿಳಿಸಿದ್ದಾರೆ.

ಫೆಬ್ರವರಿ 5 ರಂದು ನಡೆದ ಅಪಘಾತದಲ್ಲಿ ಅಲಿನ್ ಶೆರಿನ್, ತಾಯಿ ಶೆರಿನ್ ಆನ್ ಜಾನ್ ಮತ್ತುತ್ತಿತರರು ಗಂಭೀರವಾಗಿ ಗಾಯಗೊಂಡಿದ್ದರು. ಮಗುವನ್ನು ಚಂಗನಾಶ್ಶೇರಿ ಮತ್ತು ತಿರುವಲ್ಲದ ಆಸ್ಪತ್ರೆ ಹಾಗೂ ಬಳಿಕ ಫೆಬ್ರವರಿ 7 ರಂದು ಎರ್ನಾಕುಳಂ ಅಮೃತ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಮಗುವಿನ ಮೆದುಳು ನಿಷ್ಕ್ರಿಯಗೊಂಡಿತ್ತು. ನಂತರ ಕುಟುಂಬ ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿತ್ತು.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.