ಇರಾನ್ ಮೇಲೆ ಅಮೆರಿಕಾ ಮತ್ತು ಇಸ್ರೇಲ್ ನಡೆಸುತ್ತಿರುವ ಯುದ್ದದಿಂದಾಗಿ ದೇಶದಲ್ಲಿ ಭಾರೀ ಅಭಾವ ಉಂಟಾಗಿದೆ. ಯುದ್ದದ ಪರಿಣಾಮದಿಂದಾಗಿ ಅನೇಕ ಅಗತ್ಯ ವಸ್ತುಗಳ ಬೆಲೆಗಳಲ್ಲಿ ಏರಿಕೆಯಾಗಿದೆ. ಈಗ ಅದೇ ರೀತಿ ಯುದ್ದ ಮುಂದುವರೆದರೇ ವೈದ್ಯಕೀಯ ವಸ್ತುಗಳಿಗೆ ಕೂಡ ಪರದಾಡುವಂತಹ ಪರಿಸ್ಥಿತಿ ಎದುರಾಗಿದೆ. ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚು ಬಳಕೆಯಾಗುವ ಇಂಜೆಕ್ಷನ್ ಸಿರಿಂಜ್, ಐವಿ ಕೆನಾಲ್ ಸೇರಿದಂತೆ ಇನ್ನಿತರ ವಸ್ತುಗಳ ಉತ್ಫಾದನೆಗೆ ಕಚ್ಚಾವಸ್ತುವಿನ ಕೊರತೆ ಆರಂಭವಾಗಿದೆ. ಬಹುತೇಕ ಘಟಕಗಳು ಕಚ್ಚಾವಸ್ತುಗಳಿಲ್ಲದೇ ಬಂದ್ ಆಗುವ ಸ್ಥಿತಿಗೆ ತಲುಪಿವೆ. ಹುಬ್ಬಳ್ಳಿ ರಕ್ಷಂ ಮೆಡಿಕಲ್ ಡಿವೈಸ್ ಕಂಪನಿಯಲ್ಲಿ ಮೂರು ಶಿಫ್ಟ್‌ನಲ್ಲಿ 300ಕ್ಕೂ ಅಧಿಕ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಆದರೆ ಇದೀಗ ಕಚ್ಚಾವಸ್ತುಗಳ ಪೂರೈಕೆ ಕಡಿಮೆ ಆಗಿದ್ದರಿಂದ ಎರಡು ಶಿಫ್ಟ್ ಕ್ಯಾನ್ಸಲ್ ಮಾಡಿದ್ದು, ಕೇವಲ ಒಂದೇ ಒಂದು ಶಿಫ್ಟ್‌ನಲ್ಲಿ ಮಾತ್ರ ಕೆಲಸ ನಡೆಯುತ್ತಿದೆ.
ಯುದ್ದದಿಂದಾಗಿ ಯಾವುದೇ ಕಚ್ಚಾವಸ್ತುಗಳು ಬಾರದೇ ಇರುವುದರಿಂದ ಈ ರೀತಿ ಸಂಭವಿಸಿದೆ. ಇದೀಗ ಬರುವ ಕಚ್ಚಾವಸ್ತುಗಳು ಬರದೇ ಹೋದರೆ ಸಿರಿಂಜ್ ತಯಾರಾಗುವ ಘಟಕವನ್ನು ಬಂದ್ ಮಾಡಬೇಕಾಗುತ್ತದೆ ಎಂಬ ಮಾಹಿತಿ ಬಂದಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಿರಿಂಜ್ ಬೆಲೆ ಏರಿಕೆ ಜೊತೆಗೆ ಅವುಗಳು ಸಿಗದಂತಾಗಬಹುದು. ರೋಗಿಗಳಿಗೆ ಇದರಿಂದ ದೊಡ್ಡ ಮಟ್ಟದ ಹೊಡೆತ ಬೀಳಲಿದೆಯಂತೆ.