2026-05-02 11:47:00

LPG price hike | ಎಲ್‌ ಪಿಜಿ ದರ ಏರಿಕೆ ಆಟೋ ಪ್ರಯಾಣ ದರ ಹೆಚ್ಚಳ ಸಾಧ್ಯತೆ | Speed News Kannada

 LPG price hike | ಎಲ್‌ ಪಿಜಿ ದರ ಏರಿಕೆ ಆಟೋ ಪ್ರಯಾಣ ದರ ಹೆಚ್ಚಳ ಸಾಧ್ಯತೆ | Speed News Kannada

ಬೆಂಗಳೂರು: ವಾಣಿಜ್ಯ ಸಿಲಿಂಡರ್‌ಗಳ ಬೆಲೆ ಏರಿಕೆಯ ಬೆನ್ನಲ್ಲೇ ಆಟೋ ಎಲ್‌ ಪಿಜಿ ದರವೂ ಗಗನಮುಖಿಯಾಗಿದೆ. ಇಂದಿನಿಂದ ಆಟೋ ಎಲ್‌ ಪಿಜಿ ದರ 5.73 ರೂ. ಏರಿಕೆ ಆಗಿದ್ದು, ಆಟೋ ಚಾಲಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಆಟೋ ಪ್ರಯಾಣ ದರ ಹೆಚ್ಚಳವಾಗುವ ಸಾಧ್ಯತೆಗಳಿವೆ. 
ಶುಕ್ರವಾರದವರೆಗೆ ಲೀಟರ್‌ಗೆ 89.35 ರೂ. ಇದ್ದ ಆಟೋ ಎಲ್‌ ಪಿಜಿ ದರ, ಇಂದಿನಿಂದ 95.08 ರೂಪಾಯಿಗೆ ಏರಿಕೆಯಾಗಿದೆ. 
ಖಾಸಗಿ ಎಲ್‌ ಪಿಜಿ ಬಂಕ್‌ಗಳಲ್ಲಿ ದರ ಏರಿಕೆ ಒಂದೇ ರೀತಿಯಲ್ಲಿ ಇಲ್ಲ. ಒಂದೊಂದು ಬಂಕ್‌ ನಲ್ಲಿ ಒಂದೊಂದು ದರ ನಿಗದಿಯಾಗಿದೆ. ಇದರಿಂದ ಚಾಲಕರಲ್ಲಿ ಗೊಂದಲವೂ ಹೆಚ್ಚಾಗಿದ್ದು, ಇಂಧನ ದರ ಏರಿಕೆಯಿಂದ ಈಗಾಗಲೇ ಸಂಕಷ್ಟದಲ್ಲಿರುವ ಆಟೋ ಚಾಲಕರು, ಆಟೋ ದರ ಹೆಚ್ಚಿಸುವ ಕುರಿತು ಚಿಂತನೆ ನಡೆಸುತ್ತಿದ್ದಾರೆ.
ಆಟೋ ಪ್ರಯಾಣ ದರ ಹೆಚ್ಚಳವಾದರೆ ಗ್ರಾಹಕರ ಜೇಬಿಗೆ ಕತ್ತರಿ ಬೀಳಲಿದೆ. ಪ್ರಯಾಣಿಕರು ಆಟೋ ಸಹವಾಸವೇ ಬೇಡ ಎಂದು ಬಿಎಂಟಿಸಿ, ಮೆಟ್ರೋ ಮೊರೆ ಹೋದರೆ ಆಟೋ ಚಾಲಕರ ಪರಿಸ್ಥಿತಿ ಮತ್ತಷ್ಟು ಹೈರಾಣಾಗಲಿದೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.