2026-05-02 11:25:38

Anganwadi worker comes to work with IV drip|ಐವಿ ಡ್ರಿಪ್ ಹಾಕಿಸಿಕೊಂಡೇ ಕೆಲಸಕ್ಕೆ ಬಂದ ಅಂಗನವಾಡಿ ಕಾರ್ಯಕರ್ತೆ|Speed News Kannada

Anganwadi worker comes to work with IV drip|ಐವಿ ಡ್ರಿಪ್  ಹಾಕಿಸಿಕೊಂಡೇ ಕೆಲಸಕ್ಕೆ ಬಂದ ಅಂಗನವಾಡಿ ಕಾರ್ಯಕರ್ತೆ|Speed News Kannada

ಬಿಹಾರದಲ್ಲಿ ಮಾನವೀಯತೆ ಮರೆತ ಅಧಿಕಾರಿಯೊಬ್ಬರ ವರ್ತನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅನಾರೋಗ್ಯದ ಕಾರಣ ರಜೆ ಕೇಳಿದ ಅಂಗನವಾಡಿ ಕಾರ್ಯಕರ್ತೆಯೊಬ್ಬರಿಗೆ, ಅಧಿಕಾರಿ 'ವೈದ್ಯಕೀಯ ಪುರಾವೆ'  ಹಾಜರುಪಡಿಸುವಂತೆ ಪಟ್ಟು ಹಿಡಿದಿದ್ದಾರೆ.

ತೀವ್ರ ಅನಾರೋಗ್ಯವಿದ್ದರೂ ಅಧಿಕಾರಿಯ ಒತ್ತಾಯಕ್ಕೆ ಮಣಿದ ಆ ಮಹಿಳೆ, ಕೈಗೆ ಐವಿ ಡ್ರಿಪ್  ಹಾಕಿಸಿಕೊಂಡೇ, ಗಂಡನ ಸಹಾಯದೊಂದಿಗೆ ನಡುಗುತ್ತಾ ಆಸ್ಪತ್ರೆಯಿಂದ ನೇರವಾಗಿ ಕೆಲಸದ ಸ್ಥಳಕ್ಕೆ ಆಗಮಿಸಿದ್ದಾರೆ. ಈ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಂಕಷ್ಟದ ಸಮಯದಲ್ಲೂ ಇಂತಹ ಕ್ರೂರ ನಿರ್ಧಾರ ಕೈಗೊಂಡ ಅಧಿಕಾರಿಯ ವಿರುದ್ಧ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

Share:



Author:

...
ಎಚ್‌. ಮಾರುತಿ

ಪತ್ರಿಕೋದ್ಯಮದಲ್ಲಿ ಮೂರು ದಶಕಗಳ ಅನುಭವ ಹೊಂದಿದ್ದು, ದೃಶ್ಯ ಮತ್ತು ಮುದ್ರಣ ಮಾಧ್ಯಮದಲ್ಲಿ ಪರಿಣಿತಿ ಪಡೆದಿದ್ದಾರೆ. ರಾಜಕೀಯ, ದೇಶ, ಅಂತಾರಾಷ್ಟ್ರೀಯ ವಿದ್ಯಾಮಾನಗಳಲ್ಲಿ ವಿಶೇಷ ಆಸಕ್ತಿ. ರಾಜಕೀಯ ವರದಿಗಾರಿಕೆಯಲ್ಲಿ ಪಳಗಿರುವ ಇವರು ಕುಳಿತಲ್ಲೇ ಸುದ್ದಿಯನ್ನು ಹೆಕ್ಕಿ ತೆಗೆಯಬಲ್ಲ ಛಾತಿ ಹೊಂದಿದ್ದಾರೆ. ಸಾಹಿತ್ಯ ವಿದ್ಯಾರ್ಥಿಯಾದ ಇವರು ಕನ್ನಡ ಮತ್ತು ಇಂಗ್ಲೀಷ್‌ ಸಾಹಿತ್ಯದ ವಿದ್ಯಾರ್ಥಿಯಾದ ಇವರು ಉತ್ತಮ ಓದುಗರೂ ಹೌದು.